Saturday, May 14, 2011

ಆಸೆಗಳ ನಾಶ, ನೆನಪುಗಳೆಂಬ ವೇಷ!!!




ನಾ ಬಹಳಷ್ಟು ಹೇಳಿರಬಹುದು
ನಾ ಕೆಲವನ್ನು ಕೇಳಿರಬಹುದು
ಆದರೆ ನಾ ಏನು ಹೇಳಿದ್ದರೂ ನಾ ನನ್ನ ಮನದ ಮಾತನ್ನೇ ಹೇಳಿರುವೆ
ನಾ ಕೆಲವು ಕೇಳಿದ್ದರೂ ಅದರಲ್ಲಿ ಭಾವನೆಗಳ ಪೂರ್ತಿಯಾಗಿ ಬಿಚ್ಚಿಟ್ಟಿರುವೆ
ಇದೆಲ್ಲಾ ಘೊರ ತಪ್ಪೆಂದರೆ, ನಾ ಒಬ್ಬ ಕ್ಷಮಿಸಲಾರದ ಖೈದಿಯೆಂದು ಅರ್ಥೈಸಿಕೊಳ್ಳುವೆ

ನೀ ಹತ್ತಿರವಿರು ಇಲ್ಲ ನೀ ದೂರವಿರು
ನಿನ್ನ ನೆನಪುಗಳು ಮಾತ್ರ, ಎಂದೆಂದೂ ನನ್ನ ಮನದಲ್ಲಿಯೇ ಗುಯ್ಗುಟ್ಟುತ್ತಿರುತ್ತದೆ

ಮೌನ ವ್ರತವನ್ನು ಮುಂದುವರಿಸುವೆ, ನೋಡಿದರೂ ನೋಡದವನಂತೆ ನಡೆಯುವೆ
ನಿನ್ನ ಮನದಲ್ಲಿನ ಶಾಂತಿಯ ನಾ, ಎಂದೂ ಭಂಗಪಡಿಸದಂತೆ ಎಚ್ಚರವಹಿಸುವೆ
ಪ್ರೀತಿ ಅವಷ್ಯ, ಅದನ್ನು ನನ್ನ ಜೀವನದ ಭಾಗವೆಂದೇ ತಿಳಿದಿರುವೆ
ಕೆಲವೊಮ್ಮೆ ಆ ಪ್ರೀತಿಯನ್ನು ಹರಿಯುವ ನದಿಯಲ್ಲಿ ಬಿಟ್ಟುಬಿಡಬೇಕೆಂಬ ಕಠು ಸತ್ಯವನ್ನೂ ಅರಿಯುವೆ
ಆದರೂ ನನ್ನ ಕೊನೆಯ ಉಸಿರಿರುವ ತನಕ ನೀ ನನಗೆ ಸಿಗಬೇಕೆಂದು ನಾ ಮೊದಲು ಬೇಡಿಕೊಳ್ಳುವೆ

ನಾ ಏನು ಹೇಳಿದ್ದರೂ ನಾ ನನ್ನ ಮನದ ಮಾತನ್ನೇ ಹೇಳಿರುವೆ
ನಾ ಕೆಲವು ಕೇಳಿದ್ದರೂ ಅದರಲ್ಲಿ ಭಾವನೆಗಳ ಪೂರ್ತಿಯಾಗಿ ಬಿಚ್ಚಿಟ್ಟಿರುವೆ
ನೀ ಹತ್ತಿರವಿರು ಇಲ್ಲ ನೀ ದೂರವಿರು
ನಿನ್ನ ನೆನಪುಗಳು ಮಾತ್ರ, ಎಂದೆಂದೂ ನನ್ನ ಮನದಲ್ಲಿಯೇ ಗುಯ್ಗುಟ್ಟುತ್ತಿರುತ್ತದೆ

1 comment:

  1. Casino Roll
    Casino 승부 예측 사이트 Roll is the home of 스포츠스코어 high-quality, fun casino games, where you can play on all your favorite devices and games with no 텍사스 홀덤 룰 download 해외배당 required. 블랙 잭 무기 $50 No Deposit Bonus.

    ReplyDelete