Thursday, December 1, 2011
ಬಣ್ಣದ ತಂಗಾಳಿ ತಾಕಿದಾಗ!!!
ಕಪ್ಪು ಬಿಳುಪಂತೆ ಕಾಣುತಿತ್ತು ದೂರದ ಬೆಟ್ಟದ ಮರೆಯಲ್ಲಿ ಮೂಡಿದ್ದ ಸುಂದರ ಕಾಮನಬಿಲ್ಲು
ಕಪ್ಪು ಬಿಳುಪಂತೆ ಕಾಣುತಿತ್ತು ದೂರದ ಬೆಟ್ಟದ ಮರೆಯಲ್ಲಿ ಮೂಡಿದ್ದ ಸುಂದರ ಕಾಮನಬಿಲ್ಲು
ಬಣ್ಣದ ತಂಗಾಳಿ ತಾಕಿತೆನೋ ನಾ ಕಾಣೆ, ಏಳು ಬಣ್ಣವೂ ಒಮ್ಮೆಯೆ ಗೋಚರಿಸಿತು, ಕನಸಂತಿದ್ದ ನನಸಲ್ಲು
ಬಣ್ಣದ ತಂಗಾಳಿ ತಾಕಿತೆನೋ ನಾ ಕಾಣೆ, ಏಳು ಬಣ್ಣವೂ ಒಮ್ಮೆಯೆ ಗೋಚರಿಸಿತು, ಕನಸಂತಿದ್ದ ನನಸಲ್ಲು
Saturday, May 14, 2011
ಆಸೆಗಳ ನಾಶ, ನೆನಪುಗಳೆಂಬ ವೇಷ!!!
ನಾ ಬಹಳಷ್ಟು ಹೇಳಿರಬಹುದು
ನಾ ಕೆಲವನ್ನು ಕೇಳಿರಬಹುದು
ಆದರೆ ನಾ ಏನು ಹೇಳಿದ್ದರೂ ನಾ ನನ್ನ ಮನದ ಮಾತನ್ನೇ ಹೇಳಿರುವೆ
ನಾ ಕೆಲವು ಕೇಳಿದ್ದರೂ ಅದರಲ್ಲಿ ಭಾವನೆಗಳ ಪೂರ್ತಿಯಾಗಿ ಬಿಚ್ಚಿಟ್ಟಿರುವೆ
ಇದೆಲ್ಲಾ ಘೊರ ತಪ್ಪೆಂದರೆ, ನಾ ಒಬ್ಬ ಕ್ಷಮಿಸಲಾರದ ಖೈದಿಯೆಂದು ಅರ್ಥೈಸಿಕೊಳ್ಳುವೆ
ನೀ ಹತ್ತಿರವಿರು ಇಲ್ಲ ನೀ ದೂರವಿರು
ನಿನ್ನ ನೆನಪುಗಳು ಮಾತ್ರ, ಎಂದೆಂದೂ ನನ್ನ ಮನದಲ್ಲಿಯೇ ಗುಯ್ಗುಟ್ಟುತ್ತಿರುತ್ತದೆ
ಮೌನ ವ್ರತವನ್ನು ಮುಂದುವರಿಸುವೆ, ನೋಡಿದರೂ ನೋಡದವನಂತೆ ನಡೆಯುವೆ
ನಿನ್ನ ಮನದಲ್ಲಿನ ಶಾಂತಿಯ ನಾ, ಎಂದೂ ಭಂಗಪಡಿಸದಂತೆ ಎಚ್ಚರವಹಿಸುವೆ
ಪ್ರೀತಿ ಅವಷ್ಯ, ಅದನ್ನು ನನ್ನ ಜೀವನದ ಭಾಗವೆಂದೇ ತಿಳಿದಿರುವೆ
ಕೆಲವೊಮ್ಮೆ ಆ ಪ್ರೀತಿಯನ್ನು ಹರಿಯುವ ನದಿಯಲ್ಲಿ ಬಿಟ್ಟುಬಿಡಬೇಕೆಂಬ ಕಠು ಸತ್ಯವನ್ನೂ ಅರಿಯುವೆ
ಆದರೂ ನನ್ನ ಕೊನೆಯ ಉಸಿರಿರುವ ತನಕ ನೀ ನನಗೆ ಸಿಗಬೇಕೆಂದು ನಾ ಮೊದಲು ಬೇಡಿಕೊಳ್ಳುವೆ
ನಾ ಏನು ಹೇಳಿದ್ದರೂ ನಾ ನನ್ನ ಮನದ ಮಾತನ್ನೇ ಹೇಳಿರುವೆ
ನಾ ಕೆಲವು ಕೇಳಿದ್ದರೂ ಅದರಲ್ಲಿ ಭಾವನೆಗಳ ಪೂರ್ತಿಯಾಗಿ ಬಿಚ್ಚಿಟ್ಟಿರುವೆ
ನೀ ಹತ್ತಿರವಿರು ಇಲ್ಲ ನೀ ದೂರವಿರು
ನಿನ್ನ ನೆನಪುಗಳು ಮಾತ್ರ, ಎಂದೆಂದೂ ನನ್ನ ಮನದಲ್ಲಿಯೇ ಗುಯ್ಗುಟ್ಟುತ್ತಿರುತ್ತದೆ
Saturday, May 7, 2011
ಭಾವನೆಗಳು ಉದ್ದೀಪಿಸಿದಾಗ!!!
Friday, May 6, 2011
ಆಸೆ ಹೋದರೂ ನಂಬಿಕೆ ಹೋಗಲಾರದು!!!
Finally a Wicket goes down!!!
Four long years, we walked like strangers
So close we were, but never we got together
All we were saying were friendly Hi and Bye
All that we could manage, was an artificial smile
Our faces met, but never ever we felt close by heart
Then came the D day. That unforgettable JULY 13
The day which somewhat changed our confused lives
The day which created a lot of melodious feeble vibes
Simple Smiles turned into uncontrollable laughter’s
Formal Handshakes gave space for different kinds of hi fives
Someone shared something, Some other added some other thing
We without caring laughed almost for everything
All we did was to have fun and to enjoy the moments
All that we did was to pass some or the other silly comments
Amidst this beautiful journey, a kind hearted passenger finally decides alight
Every beautiful journey should come to an end someday
The Songs of Memories, sing without any pause every day
Hope our roads of life, again intersect some or the other day
All that we did and all that we wanted was just to have fun
What we created will be the memories for life, which can’t be burnt by even the monster sun

Thursday, May 5, 2011
ಭಾವನೆಗಳ ಸೇರಿಸುವೆಯೋ ಇಲ್ಲ ಕನಸ್ಸುಗಳ ಚಿಗುರಲ್ಲೇ ಹೊಸುಕಿ ಹಾಕುವೆಯೋ???
ಭಾವನಾತ್ಮಕ ಆಸೆಯ ಸುಂದರ ಹೂವುಗಳ ಹಾಸಿ ಕಾದೆ
ಭಾವನಾತ್ಮಕ ಆಸೆಯ ಸುಂದರ ಹೂವುಗಳ ಹಾಸಿ ಕಾದೆ
ಭಾವನೆಗಳ ಸೇರಿಸಿ ನಡೆ ನೀ ನನ್ನ ವಿಶಾಲವಾದ ಕನಸ್ಸುಗಳ ಹೊಸುಕದೆ
ಭಾವನಾತ್ಮಕ ಆಸೆಯ ಸುಂದರ ಹೂವುಗಳ ಹಾಸಿ ಕಾದೆ
ಭಾವನೆಗಳ ಸೇರಿಸಿ ನಡೆ ನೀ ನನ್ನ ವಿಶಾಲವಾದ ಕನಸ್ಸುಗಳ ಹೊಸುಕದೆ
ತಿಳಿದಿದ್ದರೆ ಹೇಳುವಿರಾ ಯಾವುದಾದರೂ ಸುಲಭದ ರೀತಿ???
ಕಾಡುತ್ತಿರುವ ಚಿಂತೆಗಳಿಗಿಲ್ಲ ಒಂದು ಹಿತಿ
ಮಾಡುತ್ತಿರುವ ಯೋಚನೆಗಳಿಗಿಲ್ಲ ಯಾವುದೇ ಮಿತಿ
ಮನಃ ಬಿಚ್ಚಿಟ್ಟರೂ ಹೊಗಲ್ಲೊಲ್ಲೆ ಎನ್ನುತ್ತಿರುವುದು ಭೀತಿ
ತಿಳಿದಿದೆಯೇ ಇದನೆಲ್ಲಾ ಸರಿಪಡಿಸಲು ನಿಮಗ್ಯಾವುದಾದರೂ ಸುಲಭದ ರೀತಿ???
ಮಾಡುತ್ತಿರುವ ಯೋಚನೆಗಳಿಗಿಲ್ಲ ಯಾವುದೇ ಮಿತಿ
ಮನಃ ಬಿಚ್ಚಿಟ್ಟರೂ ಹೊಗಲ್ಲೊಲ್ಲೆ ಎನ್ನುತ್ತಿರುವುದು ಭೀತಿ
ತಿಳಿದಿದೆಯೇ ಇದನೆಲ್ಲಾ ಸರಿಪಡಿಸಲು ನಿಮಗ್ಯಾವುದಾದರೂ ಸುಲಭದ ರೀತಿ???
ಸಣ್ಣದೊಂದು ಮುನಿಸು!!!
ಹಾಡಿಗೊಂದು ಹಾಡು ಸೇರಿಸುವ ಮನಸು
ಮಾಯಾ ಲೋಕದಲ್ಲಿರುವೊಂತೊಂದು ಕನಸು
ಈ ಎಲ್ಲಾ ಅನುಭವಗಳೂ ಒಂದು ರೀತಿಯಲ್ಲಿ ಸೊಗಸು
ಆದರೂ ಎಲ್ಲೋ, ಹೇಗೋ ದಾರಿ ತಪ್ಪಿ ಹೋದೆನೆಂಬ ಸಣ್ಣ ಮುನಿಸು
ಮಾಯಾ ಲೋಕದಲ್ಲಿರುವೊಂತೊಂದು ಕನಸು
ಈ ಎಲ್ಲಾ ಅನುಭವಗಳೂ ಒಂದು ರೀತಿಯಲ್ಲಿ ಸೊಗಸು
ಆದರೂ ಎಲ್ಲೋ, ಹೇಗೋ ದಾರಿ ತಪ್ಪಿ ಹೋದೆನೆಂಬ ಸಣ್ಣ ಮುನಿಸು
Monday, May 2, 2011
ಕ್ಯಾನನ್ ಅವರಿಂದ ಒಂದು ಬಹುಮಾನ ಗೆದ್ದಾಗ!!!!
There was one Photography Competition organised by Canon India. Its called as Canon Edge Photography competition. The theme was "Wild Life Photography" and it was for the month of Feb. Surprisingly i won First Prize for the Snake Pic which i shot few months back. Thanks a lot to one of my close friend Jayasimha for allowing me to take some Photos of the Rat Snake which he caught near his house in Tumkur. It was a scary experiance for me but worth the risk. I got a Lens Collector Cup as the prize. Thanks a lot to my parents and also to my bro for all their support and also to Canon for organising such a competition every month. This award means so much to me and its like an inspiration to continue Photography. I Hope to get few more of these in the future:)
Sunday, May 1, 2011
ಒಂದು ಮುತ್ತಿನಾ ಕಥೆ!!!
ಅದೊಂದು ದೊಡ್ಡ ವಿಶಾಲವಾದ ಸಮುದ್ರ
ಕೇಳುತ್ತಿದ್ದುದ್ದು ಬರೀ ಅಲೆಗಳ ಸುಮಧುರ ಗಾನ
ಆ ಅಲೆಗಳು, ತಂಗಾಳಿಯ ಹಾಡಿಗೆ ನರ್ತಿಸುತ್ತಿರುವಂತಿತ್ತು
ಕಂಡೆ ನಾನಾಗ, ದೂರದಲ್ಲೊಂದು ಬಿಸಿಲಿಗೆ ಪ್ರಕಾಶಿಸುತ್ತಿದ್ದ ಮುತ್ತೊಂದ್ದನ್ನು
ಹತ್ತಿರ ಹೋಗುತ್ತಿದ್ದಾಗ, ಕಿಡಿಗೇಡಿ ಅಲೆಯೊಂದು ಮುತ್ತನ್ನು ಮತ್ತೆ ಸಮುದ್ರದೊಳಗೆ ಕೊಂಡೊಯ್ಯುವುದ ಕಂಡೆ
ನನ್ನ ಕಣ್ಮುಂದೆಯೇ, ಅಮೂಲ್ಯವಾದ ಮುತ್ತು ನನ್ನ ಬಿಟ್ಟು ಹೊಗುತ್ತಿದೇ ಎಂಬ ಬೇಸರ
ಮತ್ತೊಂದು ಅಲೆ, ಸ್ನೇಹಿತನಂತೆ ಅದನು ನನ್ನ ಬಳಿ ತರುವುದೆಂಬ ನಂಬಿಕೆ
ಅಲೆಯೂ ಸ್ನೇಹಿತನಾಗಲಿಲ್ಲ, ನನಗೆ ಮುತ್ತೂ ಹಿಂದಿರುಗಿ ಬರುವ ನಂಬಿಕೆಯೂ ಉಳಿಯಲಿಲ್ಲ
ಆ ಮುತ್ತನು ಹಾಗೇ ಬಿಟ್ಟುಬಿಡಬೇಕೋ, ಇಲ್ಲ ಹಿಂಬಾಲಿಸಬೇಕೋ ಎಂಬ ಗೊಂದಲ
ಅದನ್ನು ಪ್ರಯತ್ನಿಸದೆ ಅಷ್ಟು ಸುಲಭವಾಗಿ ಕಳೆದು ಕೊಳ್ಳಬಾರದೆಂಬ ಹಠ
ನಿರ್ಧರಿಸಿದೆ, ಆ ಮುತ್ತನು ಹಿಂಬಾಲಿಸಬೇಕೆಂದು, ನನ್ನದಾಗಿಸಿಕೊಳ್ಳಬೇಕೆಂದು
ಎಂದೂ ನೀರಿನಲ್ಲಿ ಈಜಿದವನಲ್ಲ, ಅಂದೇನೋ ಧೈರ್ಯ ಮಾಡಿಬಿಟ್ಟೆ, ಹೆದರದೇ ಸಮುದ್ರದಲ್ಲಿ ಬಿದ್ದುಬಿಟ್ಟೆ
ಮುತ್ತು ದೂರದಲ್ಲಿ ಕಾಣಿಸುತ್ತಿದೆ, ಅಲೆಗಳು ಶಕ್ತಿ ಮೀರಿ ಹೊಡೆಯುತ್ತಿವೆ
ಹಿಂದೆ ಸರಿದರೇ ಮುತ್ತಿಲ್ಲ, ಜೀವನದಲ್ಲಾಗ ಬರೀ ಕೊರಗೇ, ನನ್ನ ಮನಸ್ಸಿಗೆ ನಾನೇ ಮೋಸ ಮಾಡಿಕೊಂಡಂತೆ
ಏತಕ್ಕಾದರೂ ಬಂದೆನಪ್ಪಾ ಇಲ್ಲಿಗೆ?? ಎಂಬ ಯೋಚನೆ ಕೆಲ ಕಾಲ ತಲೆಯಲ್ಲಿ ಆವರಿಸಿ ಬಿಟ್ಟಿತಾದರೂ
ಅದನು ಕಿತ್ತೆಸೆದೆ, ಛಲದಿಂದ ಮುನ್ನುಗಿದೆ, ಅಲೆಗಳ ಧೈರ್ಯವಾಗಿ ಎದುರಿಸಿದೆ. ಮುತ್ತಿನ ಹತ್ತಿರ ಕೊನೆಗೂ ಸೆರಿಯೇಬಿಟ್ಟೆ.
ಆ ಮುತ್ತು!!! ಪದಗಳೇ ಬರುವುದಿಲ್ಲ, ಆ ಸಂತಸದ ಕ್ಷಣವನ್ನು ವರ್ಣಿಸಲು, ಆ ಮರೆಯಲಾಗದ ಅನುಭವವನ್ನು ವ್ಯಕ್ತಪಡಿಸಲು
ಆ ಚಳಿಯಲ್ಲೂ ಬೆವರಿದೆ, ದಣಿದ್ದಿದ್ದರೂ, ಎಲ್ಲವನು ಮರತುಬಿಟ್ಟೆ, ಕಣ್ಮುಂದೆ ನನ್ನ ಸುಂದರವಾದ ಮುತ್ತು!!!
ಕನಸಲ್ಲಿ ಅಂದೆಂದೋ ಕಂಡ ನನ್ನ ಮುದ್ದಾದ ಮುತ್ತು, ಇದು ನನಸಾ ಎಂದು ಒಮ್ಮೆ ಸಂಶಯಪಟ್ಟೆ
ಇದೆಲ್ಲದರ ನಡುವೆ, ನಾ ಗಮನಿಸಿದ್ದು, ಆ ಹೊಳೆಯುವ ಮುತ್ತಿಗಿದ್ದ ಸುಂದರ ಕಣ್ಣುಗಳಲ್ಲಿ ಸುರಿಯುತ್ತಿದ್ದ ಕಣ್ಣೀರ ಧಾರೆಯ
ಮುತ್ತೂ?? ಕಣ್ಣೀರು?? ಹಾ. ಅದೊಂದು ಜೀವಂತ ಮುತ್ತು, ಕನಸಲ್ಲೂ ಕಾಣಲಾಗದ ಅಪೂರ್ವವಾದ ಮುತ್ತು
"ನಿನಗಾಗಿ ಬಹಳ ಯೋಚಿಸಿ, ಕಷ್ಟಪಟ್ಟು, ಅಲೆಗಳ ಕೋಟೆಯನ್ನೇ ಭೇಧಿಸಿ ಇಲ್ಲಿಗೆ ಬಂದಿರುವೆ, ನೀ ಏಕೆ ಹೀಗೆ ಅಳುತ್ತಿರುವೆ" ಎಂದೆ
"ನೀನು ನನ್ನನ್ನು, ನನ್ನ ಮನಸ್ಸನ್ನು ಅಪಹರಿಸಿ ಹೋಗುವುದು ನನಗಿಷ್ಟವಿಲ್ಲ, ನಾ ಇಲ್ಲೇ, ಹೀಗೇ, ಸುಖವಾಗಿ ಇರುವೆ, ಇಲ್ಲಿಯೆ ಬಿಟ್ಟುಬಿಡು" ಎಂದು ಹೇಳಿಬಿಟ್ಟಿತು
ತಡೆಯಲಾಗದ ಬೇಸರವಾಯಿತು, ಇಲ್ಲವೆಂದಲ್ಲ, ಆದರೆ ಆ ಸುಂದರವಾದ ಕಣ್ಣಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ನೀರನು ನೋಡಲಾಗಲಿಲ್ಲ, ಮರು ಪ್ರಶ್ನೆ ಕೇಳುವ ಮನಸ್ಸೂ ಮಾಡಲಿಲ್ಲ
ಅಷ್ಟೇ, ಬಂದ ದಾರಿಯೇನೋ ಪರೀಕ್ಷಿಸುವಂತಿತ್ತು, ಅನುಭವವೂ ಹೊಸದರಂತಿತ್ತು. ಆದರೆ ಕಂಡ ಕನಸುಗಳು ನನಸಾಗಲಿಲ್ಲ, ಹಿಂದಿರುಗಲೇಬೇಕೆಂಬ ಕಠು ಸತ್ಯದ ಅರಿವಾಯಿತು
ಅಲ್ಲಿಯವರೆಗೂ ಉತ್ಸಾಹದಿಂದಿದ್ದ ಕುಣಿಯುತ್ತಿದ್ದ ಹುಚ್ಚು ಮನಸ್ಸು, ಕಣ್ಣೀರಿಗೆ ಕರಗಿ ಮಂಕಾಗಿ ಮೂಲೆ ಸೇರಿ ಹಿಂದೆಸರಿದುಬಿಟ್ಟಿತು
ಆದರೂ ಮನದ ಮೂಲೆಯಲ್ಲೊಂದು ಸಣ್ಣ ಆಸೆ, ವಿಶ್ವಾಸ. ಆ ಮುತ್ತು ನನ್ನೊಡನೆ ಬರಲು ಎಂದಾದರೂಮ್ಮೆ ಮನಸ್ಸು ಮಾಡುವುದೆಂದು
ಆ ಸುಂದರ ಒಂಟಿ ಮುತ್ತು, ನನ್ನ ಜೋಡಿಯಾಗುವ ಆ ಕನಸಿನ ದಿನವನ್ನು ಕಾಯುವುದ ನಿಲ್ಲಿಸನಾನೆಂದೆಂದು
ನಾನಾಗೇ ಹಿಂದಿರುಗಿ ಹೋಗಲಾರೆ ಆ ಮುತ್ತನು ಅದರ ಪುಟ್ಟ ಲೋಕದಿಂದ ಹೊರತರಲು
ಆದರೆ ಸಾದ್ಯವೇ ಇಲ್ಲ, ಆ ಮುತ್ತಿನೊಡನೆ ಕಳೆದ ಕೆಲವು ಸವಿಯಾದ ಕ್ಷಣಗಳನ್ನು ಮರೆಯಲು
ಎಷ್ಟು ಹುಡುಕಿದರೂ, ಎಲ್ಲಿಯೂ ಸಿಗದ ಸುಂದರ ಸ್ಪೂರ್ತಿಯ ಸೆಲೆ ಆ ಮುತ್ತು
ಎಷ್ಟೇ ಗಟ್ಟಿಯಾಗಿ ಹಿಡಿಯಲು ಹೋದರೂ, ಜಾರಿ ಹೋಗಿಬಿಡುವುದು ಕೈಯಿಂದ ಮರಳು
Saturday, April 30, 2011
ಭಾವನೆಗಳೇ ನೀವೇಕೆ ಹೀಗೆ???
ಓ ನನ್ನ ಭಾವನೆಗಳೇ!!!
ನೀವೇಕೆ ಹೀಗೆ ಕಾಡುತ್ತಿರುವಿರೀ???
ಮನಸ್ಸನ್ನು ದಪ್ಪ ಸೂಜಿವೊಂದರಿಂದ ಚುಚ್ಚುತ್ತಿರುವಿರಲ್ಲ
ತಲೆಯನ್ನು ಯೋಚನೆಗಳ ಸುಳಿಯಲ್ಲಿ ಮುಳುಗಿಸಿರುವಿರಲ್ಲ
ನಾ ಏನು ಮಾಡಿದ್ದೆ ನಿಮಗೆ? ನಾ ಎಂದು ಹೀಗೆ ಕಾಟನೀಡಿದ್ದೆ ನಿಮಗೆ ಹೇಳಿ!!!
ಮಾತನಾಡಲು ಅರ್ಥಪೂರ್ಣ ಮಾತುಗಳು ನೆನಪಾಗುತ್ತಿಲ್ಲ
ಬೇಡವಾದ ನೆನೆಪುಗಳೇ ಪದೇ ಪದೇ ನೆನಪಾಗುತ್ತಿದೆಯಲ್ಲ
ಕೆಲಸಕ್ಕೆ ಕುಳಿತರೆ ಏಕಾಗ್ರತೆಯಿಂದ ಮಾಡಿ ಮುಗಿಸಲಾಗುತ್ತಿಲ್ಲ
ನಿದ್ರಿಸಬೇಕೆಂದರೆ ನಿದ್ರಾದೇವತೆಯು ನನ್ನನ್ನಾವರಿಸಲು ನೀವು ಅವಕಾಶ ನೀಡುತ್ತಿಲ್ಲ
ಇದು ಹೀಗೆ ಮುಂದುವರಿಸದಿರಲು ನಿಮಗೇನು ಬೇಕೆಂದು ಹೆಚ್ಚು ಕಾಡಿಸದೆ ಕೇಳಿ!!!
ತಿನ್ನುತ್ತಿರುವ ಪದಾರ್ಥಗಳು ರುಚಿಸುತ್ತಿಲ್ಲ
ಹೊಸ ವಿಷಯಗಳಿಗೆ ಆಸಕ್ತಿ ನೀಡಲಾಗುತ್ತಿಲ್ಲ
ಕನಸುಗಳ ಹಿಂಬಾಲಿಸಲು ದಾರಿಯೇ ಕಾಣಿಸುತ್ತಿಲ್ಲ
ನನ್ನ ಮನಸ್ಸು ನ್ನನ್ನಲ್ಲೇ ಉಳಿದಿದೇ ಎಂದು ಖಡಾಖಂಡಿತವಾಗಿ ಹೇಳಲಾಗುತ್ತಿಲ್ಲ
ಕತ್ತಲೆಯಿಂದ ಕಪ್ಪಾಗಿರುವ ನನ್ನ ಈ ಮಾಯಾ ಲೊಕಕ್ಕೆ, ಬಣ್ಣದ ಬೆಳಕನ್ನು ಎಂದು ತೋರಿಸುವಿರ ಹೇಳಿ!!!
ನೀವಂತೂ ನನ್ನ ಹಿಡಿತಕ್ಕೆ ಸಿಗಲಿಲ್ಲ, ಸಿಗುತ್ತಿಲ್ಲ, ಸಿಗುವುದೂ ಇಲ್ಲ
ನನ್ನನ್ನೇ ನಿಮ್ಮ ಬಿಡಿಸಿಕೊಳ್ಳಲಾಗದ ಬಲೆಯೊಂದರಲ್ಲಿ ಸಿಲುಕಿಸಿಕೊಂಡಿರುವಿರಲ್ಲ
ಬಿಟ್ಟು ಬಿಡೀ ನನ್ನ ಈ ಏನೂ ಅರಿಯದ ಮುಗ್ಧ ಮನಸ್ಸನ್ನು
ಕಾಣಲು ಬಿಡೀ ಮೊದಲಿನಂತೆ ಸಾವಿರಾರು ಸುಂದರ ಕನಸ್ಸುಗಳನ್ನು
ಮನಸ್ಸನ್ನು ಇಷ್ಟುಕಾಲ ಹೀಗೆ ಘೋರವಾಗಿ ಬಂಧಿಸಲು, ನಾನೇನು ಅಂತಹ ದೊಡ್ಡ ಅಪರಾಧ ಮಾಡಿರುವೆನೆಂದು ಹೇಳಿ!!!
ನಾ ಇನ್ನು ಈ ಹುಚ್ಚು ಪರದಾಟವನ್ನು ಸಹಿಸಲಾರೆ
ಆದರೂ ನೀವು ನೀಡಿದ ನೋವನ್ನು ನಾ ಎಂದೂ ಮರೆಯಲಾರೆ
ಈ ಕ್ಷಣಗಳನ್ನೇ ನಾ ನೆನೆಯುತ ಸುಮ್ಮನೆ ಮಂಕಾಗಿ ಕೂರಲಾರೆ
ಆದರೂ ನನ್ನ ಅನುಭವಗಳ ಪೂರ್ಣಾರ್ಥವನ್ನು ಕವಿತೆಯ ಸಾಲುಗಳ ಮೂಲಕ ವ್ಯಕ್ತಪಡಿಸದೆ ಇರಲಾರೆ
ಹೀಗೆ ಮಾಡಬಾರದೆಂದು ಅಧಿಕಾರದಿಂದ ಹೇಳಲು ನೀವು ನನಗೆ ಯಾರೆಂದು ನಿಮ್ಮನ್ನು ನೀವೇ ಕೇಳಿ ಹೇಳಿ!!!
ನಾ ಕಂಡ ನೂರಾರು ಕನಸ್ಸುಗಳ ಮತ್ತೆ ಹಿಂಬಾಲಿಸಬೇಕು
ಈ ನೋವುಗಳಿಂದ ಹಲವು ಪಾಠಗಳನ್ನು ಕಲಿಯಲೇಬೇಕು
ನೀವು ನನ್ನ ಕನಸ್ಸುಗಳಿಗೆ ನೆಲೆಯಾಗುವಿರೆಂದು ತಿಳಿದುಕೊಂಡಿದ್ದೆ
ಆದರೆ ಕನಸ್ಸು ನನಸಾಗುವಷ್ಟರಲ್ಲೇ, ಕಾಣದೇ ಬಂದು ಹೋದ ಸಣ್ಣ ಅಲೆಯೆಂದು, ನನ್ನನು ನಾನೇ ಸಂತೈಸಿಕೊಂಡುಬಿಡುವೆ
ಇನ್ನೂ ನೀವು ನನ್ನ ನಿಮ್ಮಲ್ಲಿ ಹಿಡಿದಿಟ್ಟುಕೊಳ್ಳಲು ನಾನೇನು ನಿಮ್ಮ ಮುತ್ತಜ್ಜನ ಸೊತ್ತೇ ಅಥವಾ ನೀವು ರೊಟ್ಟಿ ಹಾಕಿ ಸಾಕಿದ ಅಬ್ಬೇಪಾರಿ ನಾಯೇ ನೀವೇ ಹೇಳಿ!!!!!
Subscribe to:
Posts (Atom)