ಪ್ರಿಯೇ, ನೀನಾಗಲಾರೆ ನನಗೆಂದು ಪೀಡೆ
ನಟಿಸಿದ್ದು ಸಾಕು, ಮುಗುಳ್ನಗುತ್ತ ಇನ್ನು ನನ್ನೊಡನೆ
ನಡೆ
ಮಳೆಯಿರಲಿ, ಬಿಸಿಲಿರಲಿ, ಹಿಡಿಯುವೆ ಸದಾ ಪ್ರೀತಿಯ ಕೊಡೆ
ಜತೆಗೂಡಿ ನಡೆದರೆ, ಸೃಷ್ಟಿಯಾಗುವುದು ಸವಿನೆನಪುಗಳ ಹಾಡೇ
ಪ್ರಿಯೇ, ನಿನಗೇ ಗೊತ್ತಿಲ್ಲವೇ, ನೀನಿಲ್ಲದೆ ನನ್ನ ಬಾಳು
ಬರುಡೆ
ಪ್ರೀತಿಯ ಮಳೆ ಎಂದಾದರೂ ಸುರಿವುದೆಂಬ ನಂಬಿಕೆಯೊಡನೆ
ನಡೆದೆ
ಪ್ರೀತಿಯ ಕೊಂದು, ಕೊಲೆಗಾರನಾಗಬಾರದೆಂಬ ಸಣ್ಣ ಹಠವ
ಹಿಡಿದೆ
ಪ್ರೀತಿಯ ಪ್ರೀತಿಯಿಂದಲೇ ಗೆಲ್ಲಬೇಕೆಂಬ ಸಾಹಸದ ಪ್ರಯತ್ನವ
ಮಾಡಿದೆ
ಪ್ರಿಯೇ, ನೀನೆಂದುಕೊಂಡಿರುವೆ ನಿನ ಆ ಮನಸ್ಸೊಂದು,
ಕಲ್ಲಿನ ಬಂಡೆ
ನನ್ನ ಮನಸೆಂಬ ಆಯುಧದಿಂದ ಅದ ಕರಗಿಸುವ ಹುಚ್ಚು ಕನಸೊಂದ
ಕಂಡೆ
ಪ್ರೀತಿಯೊಂದು ಕ್ರೀಡೆಯೇ, ಭಾವನೆಗಳೇ ಇಲ್ಲಿ
ಒಡೆಯಬಹುದಾದ ಚಂಡೆ
ಕಣ್ಣೋಟವೇ ಸಾಕು, ನುಗ್ಗುವುವು ಗೊಂದಲ ಸೃಷ್ಟಿಸುವ,
ಚುಚ್ಚುವ, ಬಾಣಗಳ ಹಿಂಡೆ
ಬೇಡದ ಮಾತುಗಳ ನುಡಿದು ನೋಯಿಸಬೇಡ, ನನ್ನ ಹೃದಯವೇನು
ಜೀವವಿಲ್ಲದ ಮರದ ತುಂಡೆ?
ಕಾದು ಕಾದು ಮನಸಾಗಿ ಹೊಗಿದೆ ಮುಟ್ಟಿದರೆ ಸುಟ್ಟುಹೋಗುವ
ಕೆಂಪಾದ ಹಂಡೆ
ಬೇಡದ ಚಿಂತೆಗಳಲ್ಲಿ ಮುಳುಗಿ, ತಲೆಯಾಗಿ ಹೋಗಿದೆ
ಬೋಬ್ಬೆಬರಿಸುವ ಕೆಂಡದ ಉಂಡೆ
ಗೊಂದಲ, ಬೇಸರ, ನಿರಾಸೆ, ಎಲ್ಲವೂ ಸೇರಾಗಿವೆ ನನ್ನ ಮತ್ತೆ
ಮತ್ತೆ ಕೊಲ್ಲುವ ದಂಡೆ
ಕಾಯಿಸಿ ಪರೀಕ್ಷಿಸುವುದು ಸುಖವೇ, ಆದರೆ ಕಾಯುವುದು ಒಂದು
ರೀತಿಯ ನಾಯಿ ಪಾಡೇ
ಯೋಚಿಸಬಾರದ
ಯೋಚನೆಗಳ ಮಾಡಿ ಆತುರಪಡಬೇಡ, ನೀ ಇನ್ನೊಮ್ಮೆ ಚಿಂತಿಸಿ ನೋಡೇ
ಹೇಳದೆ ಬಚ್ಚಿಟ್ಟಿದ್ದರೆ, ತಡಮಾಡದೆ ಪ್ರೀತಿಯ ಹೊರಹಾಕಿ
ನನಗಾಗಿ ಸಂತೋಷದಿಂದ ಹರಡೆ
ಸೋತು ಸುಣ್ಣಾಗಿರುವೆ, ಗೆಲ್ಲಿಸಿಬಿಡೆ, ಗೆದ್ದೆನೆಂದು
ಮನಸ್ಸಿಗೆ ಗಟ್ಟಿಯಾಗಿ ಹೇಳುವೆ ತಟ್ಟಿ ನನ್ನ ತೊಡೆ
No comments:
Post a Comment