Sunday, August 12, 2012

ಪ್ರೀತಿಯ ತಂಗಾಳಿ ಸೋಕಿದಾಗ!!!




ಹೂವೊಂದು ಅರಳಾಯ್ತು
ಹೊಸ ಆಸೇ, ಚಿಗುರಾಯ್ತು
ಮಂಜೊಂದು ಸೋಕಾಯ್ತು
ಜೀವನವೇ ಕನಸಾಯ್ತು
ಹೊಸ ದಾರಿಯಲ್ಲಿ ನನಗೇ, ನಿನ್ನೊಡನೇ ಪಯಣಿಸಲು
ಒಂದೇ ಕೊಡೆಯ ಕೆಳಗೆ, ಮಳೆಯನ್ನು ಸವೀಯಲೂ
ಆ ಮೊಡದಲ್ಲಿ, ನಿನ್ನ ಛಾಯೇ ಕಂಡೆನಾ
ಆ ಛಾಯೆಯನ್ನು, ನನ್ನ ಕಣ್ಣಲಿ ಕಾಣು ಬಾ


ಕಣ್ಣಲ್ಲೇ ಮಾತಾಯ್ತು
ಭಾವನೆಗಳು ಚಿಮ್ಹೋತೂ
ಕಿರುನಗೆಗೆ ಸೋತಾಯ್ತು
ಮೌನವೂ ಸುಖವಾಯ್ತು
ನಿನ್ನ ಮರೆಯಲು ಹೋದರೆ, ಒಲ್ಲೆ ಎನ್ನುತಿದೆ ಮನಸು
ನೀನಿಲ್ಲದೆ ನಾನು, ನೀರಾಚೆ ಉಳಿದ ಮೀನು

ಪ್ರತಿಉಸಿರಲಿ ಬೆರೆತೋದೆ
ಹಾಡುಗಳಿಗೆ ಸ್ವರವಾದೆ
ಕನಸುಗಳಿಗೆ ನೆಲೆಯಾದೆ
ನನ್ನ ಸ್ಪೂರ್ತಿಗೆ ಸೆಲೆಯಾದೆ
ಪ್ರಿಯೆ ನಿನ್ನಯ ಪ್ರೀತಿಯ, ಬಯಸಿರುವ ಪ್ರಿಯತಮನು ನಾ
ಕನಸೆಲ್ಲವನ್ನು, ನನಸಾಗಿ ಮಾಡುಬಾ

ಹೂವೊಂದು ಅರಳಾಯ್ತು
ಹೊಸ ಆಸೇ, ಚಿಗುರಾಯ್ತು
ಮಂಜೊಂದು ಸೋಕಾಯ್ತು
ಜೀವನವೇ ಕನಸಾಯ್ತು
ಹೊಸ ದಾರಿಯಲ್ಲಿ ನನಗೇ, ನಿನ್ನೊಡನೇ ಪಯಣಿಸಲು
ಒಂದೇ ಕೊಡೆಯ ಕೆಳಗೆ, ಮಳೆಯನ್ನು ಸವೀಯಲೂ
ಆ ಮೊಡದಲ್ಲಿ, ನಿನ್ನ ಛಾಯೇ ಕಂಡೆನಾ
ಆ ಛಾಯೆಯನ್ನು, ನನ್ನ ಕಣ್ಣಲಿ ಕಾಣು ಬಾ


No comments:

Post a Comment