ನಮ್ಮ ಯೋಗರಾಜ್ ಭಟ್ಟರ, ಯಶಶ್ವಿ "ಡ್ರಾಮ"
ಚಿತ್ರದ, "ಬೊಂಬೆ ಆಡ್ಸೋವ್ನು, ಮೇಲೆ ಕುಂತವ್ನೆ" ಹಾಡಿನ ಸಾಲುಗಳನ್ನು ಬದಲಾಯಿಸಿ ನಮ್ಮ ಇಂಜಿನಿಯರ್ಗಳಿಗೆ ಹೋಲೋಹಾಗೆ ಬರೆಯೋಕ್ಕೆ ಪ್ರಯತ್ನಿಸಿದ್ದೀನಿ. ಓದಿ, ಹೇಗಿದೆ ಅಂತ
ಹೇಳ್ಬಿಡಿ. ಸಾಲುಗಳನ್ನು ಬದಲಾಯಿಸಿದ್ದಕ್ಕೆ ಭಟ್ಟರಿಗೆ ಒಂದು SORRY.
ಮ್ಯಾನೇಜರ್ ಸೇರುಸ್ಕೊತಾನೆ, ಸೇರ್ಕೋಬೇಕು, ಕೆಲ್ಸಾ
ಕೊಡ್ತಾನೆ, ಮಾಡ್ಬೇಕು, ಕೊನೆಗೆ ತೆಗ್ಧಾಕ್ತಾನೆ, ಸುಮ್ನೆ ಹೊರಟ್ ಹೋಗ್ಬೇಕು. ಇಂಜಿನಿಯರ್ಗಳ
ಕರ್ಮ ಈ ಪದ್ಯ ಹೇಳ್ತದೆ. ಓದು ಓದು ಓದು ಈ ಪದ್ಯವಾ...
ರೇಟಿಂಗ್ ಕೊಡೋವ್ನು, ರೂಮಲ್' ಕುಂತವ್ನು
ನಮ್ಗೇ ನಿಮಗೇ ಯಾಕೇ ಟೆಂಷನ್ನು
ರೇಟಿಂಗ್ ಕೊಡೋವ್ನು, ರೂಮಲ್' ಕುಂತವ್ನು
ನಮ್ಗೇ ನಿಮಗೇ ಯಾಕೇ ಟೆಂಷನ್ನು
ಕೊನೇತಂಕ ಸತ್ರುನುವೇ ಸಿಗೋದ್ ಚಿಪ್ಪೇನಾ
ಹೆಡ್ಫೋನ್ಸ್ ಹಾಕ್ಕೊಂಡ್, ಕೆಲ್ಸಾ ಮಾಡೋಂಗ್ ಡ್ರಾಮ ಆಡೋಣಾ
ರೇಟಿಂಗ್ ಕೊಡೋವ್ನು, ರೂಮಲ್' ಕುಂತವ್ನು
ನಮ್ಗೇ ನಿಮಗೇ ಯಾಕೇ ಟೆಂಷನ್ನು
ಇಷ್ಶೂಸ್ಗೆ ಕೊನೆಯಿಲ್ಲ
ಕರ್ಮಕ್ಕೆ ಮಿತಿಯಿಲ್ಲ
ತಲೆಕೆಟ್ಟು ಹೋಯ್ತಲ್ಲಾ
ಪರಿಹಾರ ಇಲ್ವಲ್ಲಾ
ಸಂಬ್ಳಾ ಬದನೇಕಾಯಿ
ಇಂಕ್ರಿಮೆಂಟ್ ಕಡ್ಲೇಕಾಯಿ
ಅಂದಿದ್ ಮಾವಿನ್ಕಾಯಿ
ಕೊಟ್ಟಿದ್ ಹಾಗುಲ್ಕಾಯಿ
ತಲೆಯು ಕೆಡ್ತಾ ಇದ್ರೆ, ಕೂದ್ಲು ಉದುರ್ದೆ ಇರುತ್ತಾ
ಏಸೀಲಿ ಕೂತಿದ್ರು, ಬೆವ್ರು ಬರ್ದಲೇ ಇರುತ್ತಾ
ಹುಷಾರಾಗ್ ಕೋಡ್ ಬರುದ್ರುನು ಡಿಫೆಕ್ಟ್ಸ್ ಬರಲ್ವಾ
ಟೆಂಪೊರರಿ ಫಿಕ್ಸು ಮಾಡಿ, ಡ್ರಾಮ ಮುಗ್ಸೋಣ್ವಾ
ರೇಟಿಂಗ್ ಕೊಡೋವ್ನು, ರೂಮಲ್' ಕುಂತವ್ನು
ನಮ್ಗೇ ನಿಮಗೇ ಯಾಕೇ ಟೆಂಷನ್ನು
ಪ್ರತಿ ಪ್ರಾಜೆಕ್ಟಲ್ಲೂ, ನೂರೆಂಟು ಪ್ರಾಬ್ಲಾಮ್ಸು
ಇಲ್ಲೊಬ್ಬ ಕೋಡರ್ರೂ, ಅಲ್ಲೊಬ್ಬ ಟೆಸ್ಟರ್ರೂ
ರಿಕ್ವೈರ್ಮೆಂಟ್ಸ್ ತರೋವ್ರು, ಆನ್ಸಯ್ಟ್ ಕೋ-ಆರ್ಡಿನೇಟರ್ರು
ಕೋಡರ್ಸು ಮಲ್ಗವ್ರೇ, ಯಾರಪ್ಪಾ ಕುಟ್ಟೋರ್ರೂ
ಯಾವನೋ ತಲೆಕೆಟ್ಟು ಬರ್ದುಹೊಗವ್ನೀಕೋಡು
ಅರ್ಥಾನೆ ಆಗದಿದ್ರು ಎಲ್ಲೋ ಹೇಗೋ ಫಿಕ್ಸ್ ಮಾಡು
ಯಾವಾಗ್ಲು ಡಿಫೆಕ್ಟ್ಸ್ ಬಂದ್ರೆ ನಾವೇನ್ ಮಾಡೋಣಾ
ಸ್ಮೋಕಿಂಗ್ ಜೊನಲ್, ದಮ್ಮು ಹೊಡಿತ ಡ್ರಾಮ ಆಡೋಣ
ರೇಟಿಂಗ್ ಕೊಡೋವ್ನು, ರೂಮಲ್' ಕುಂತವ್ನು
ನಮ್ಗೇ ನಿಮಗೇ ಯಾಕೇ ಟೆಂಷನ್ನು
ರೇಟಿಂಗ್ ಕೊಡೋವ್ನು, ರೂಮಲ್' ಕುಂತವ್ನು
ನಮ್ಗೇ ನಿಮಗೇ ಯಾಕೇ ಟೆಂಷನ್ನು
ಕೊನೇತಂಕ ಸತ್ರುನುವೇ ಸಿಗೋದ್ ಚಿಪ್ಪೇನಾ
ಹೆಡ್ಫೋನ್ಸ್ ಹಾಕ್ಕೊಂಡ್, ಕೆಲ್ಸಾ ಮಾಡೋಂಗ್ ಡ್ರಾಮ ಆಡೋಣಾ
No comments:
Post a Comment