ಜೀವನ!!!!!! ಈ ಪದದಲ್ಲಿ ಇರೋದು ಮೂರೆ ಅಕ್ಷರ. ಆದರೆ ಎಷ್ಟು ಅರ್ಥ, ಎಷ್ಟು ಅನರ್ಥಗಳಿವೆ ಅಲ್ವ. ಆರಾಮಾಗಿ ಇರ್ಬೇಕಾದ ಜೀವನ್ದಲ್ಲಿ, ನಾವೆ ಸುಮ್ನೆ ಬೆಡ್ದಲೆ ಇರೊ ವಿಷಯಗಳ ಸುಳಿಲಿ ಸಿಕ್ಕಿ ಒದ್ದಾಡ್ತೀವಿ. ನಮ್ಗೆ ಎನ್ ಎನ್ ಆಗುತ್ತೆ ಅನ್ನೊಕ್ಕಿಂತ, ಅದುನ್ನ ನಾವ್ ಹೇಗೆ ನೊಡ್ತೀವಿ, ತೊಗೋತೀವಿ ಅನ್ನೊದು ಮುಖ್ಯ. ನಾನು ಜೀವನಾನ ಒಂದು ಕ್ರಿಕೇಟ್ ಪಂದ್ಯಕ್ಕೆ ಹೊಲಿಸಿ ಬರೆಯೊಕ್ಕೆ ಪ್ರಯತ್ನಪಟ್ಟಿದ್ದೀನಿ. ಎಲ್ಲಾ ಚಿಂತೆಗಳ್ನ ಸ್ವಲ್ಪ ಹೊತ್ತು ಮರ್ತು ಆರಾಮಾಗಿ ಓದಿ.
ಜೀವನವೆಂಬ ಪಂದ್ಯ
ಜೀವನ ಒಂದು ಕ್ರಿಕೆಟ್ ಪಂದ್ಯವಿದ್ದಂತೆ
ಎಲ್ಲರ ಹೃದಯಗಳು ಒಂದೊಂದು ಮೈದಾನದಂತೆ
ಕನಸುಗಳು ನಮ್ಮನು ಹುರಿದುಂಬಿಸುವ ಪ್ರೇಕ್ಷಕರಂತೆ
ಸಕಲವನ್ನು ನಿರ್ಧರಿಸುವ ಆ ವಿಧಿಯೇ ತೀರ್ಪುಗಾರರಂತೆ
ಸೋಲು ಗೆಲುವೆಂಬ ಸಿಹಿ ಕಹಿಗಳ ಮಿಶ್ರಣವೇ ಈ ಬಾಳು
ಅರಿಯದಿದ್ದರೆ ಈ ಮರ್ಮ, ಜೀವನವಾಗುವುದು ಬರೀ ಗೋಳು
ಅವಕಾಶಗಳು ದೇವರು ನೀಡುವ ಅಮೂಲ್ಯವಾದ ವರಗಳಂತೆ
"ಸದಾ ಗೆಲುವು ನನ್ನದೇ" ಎಂದು ತಿಳಿಯುವುದು ಹುಚ್ಚು ಭ್ರಾಂತಿಗಳಂತೆ
ಶತಕ ಬಾರಿಸುವುದು ಕಟ್ಟಿದ ಕನಸುಗಳ ನನಸಾಗಿಸಿದಂತೆ
ಪರಿಶ್ರಮವಿದ್ದರೆ ಗೆಲುವೆಂಬುದು ಹಿಂಬಾಲಿಸುವುದು ನೆರಳಿನಂತೆ
ಪರರ ಸಂತೋಷದಲ್ಲಿ ನಮ್ಮನ್ನು ಕಾಣುವುದೇ ಈ ಜೀವನ
ಸಂಘಟಿತ ಸಂಚಲನದಿಂದ ವಿಜಯ ಪಥಾಕೆ ಹಾರಿಸಿದರೆ ಜೀವನವಾಗುವುದು ಪಾವನ
ಸೋಲುಗಳು ಬರುವುದು ಮಳೆ ಹನಿಗಳಂತೆ
ಹಿಮ್ಮೆಟ್ಟಿಸಿ ನಿಲ್ಲುವವನಾಗುವನು ಆದರ್ಶ ಪುರುಶನಂತೆ
ಉಧ್ದಟತನದಿಂದ ಹಾಳಾಗುವುದು ವೈಯಕ್ತಿಕ ಬದುಕನ್ನು ಬಲಿಕೊಟ್ಟಂತೆ
ಸಂಪಾದಿಸಿದ ಕಲೆಯನ್ನು ಅನಾಮಿಕನಿಗೆ ಒಪ್ಪಿಸುವುದು ಬಾಜಿ ಕಟ್ಟಿದಂತೆ
ಪ್ರೀತಿ ವಿಶ್ವಾಸಗಳಿಂದ ಕೀರ್ತಿ ಸಂಪಾದಿಸುತ ನಡೆದರೆ ಸ್ವರ್ಗವೆಂಬ ಪಂದ್ಯ ಶ್ರೇಷ್ಠ ಬಹುಮಾನ
ದಾರಿ ತಪ್ಪಿದರೆ ಬಂದೇಬರುವುದು ಯಮನ ನರಕವೆಂಬ ಆಯ್ಕೆ ಸಮಿತಿಯಿಂದ ಆಹ್ವಾನ
ಇಂತಿ ನಿಮ್ಮ ಪ್ರೀತಿಯ
ಪ್ರದೀಪ
No comments:
Post a Comment