ನೀನೇ
ನಾನೀನೆ
ನನಗೆಲ್ಲಾ ನೀನೇ
ಅಲ್ಲೂ ನೀನೇ
ಇಲ್ಲೂ ನೀನೇ
ಎಲ್ಲೆಲ್ಲೂ ನೀನೇ
ಅರೆ ಅರೆ ಅರೆ ಅರೆ, ಕನಸಲ್ಲೂ
ಅರೆ ಅರೆ ಅರೆ ಅರೆ, ನೀನೇನೇ
ಆಸೆಯ ಕಣ್ಣಲಿ ಸೃಷ್ಟಿಸಿ
ಹಾರಲು ರೆಕ್ಕೆಯ ಕಟ್ಟಿಸಿ
ಗಾಳಿಗೆ ತೇಲಿ ಬಿಟ್ಟು ಹೊರಟಲ್ಲೇ
ಅರೆ ಅರೆ ಅರೆ ಅರೆ, ಮನಸಲ್ಲೂ
ಅರೆ ಅರೆ ಅರೆ ಅರೆ, ನೀನೇನೇ
ಸ್ಪೂರ್ತಿಯ ಸೆಲೆ ನೀನೇ
ನನ್ನ
ಪ್ರೀತಿಯ ನೆಲೆ ನೀನೇ
ಸ್ಪೂರ್ತಿಯ ಸೆಲೆ ನೀನೇ
ನನ್ನ
ಪ್ರೀತಿಯ ನೆಲೆ ನೀನೇ
ಅರೆ ಅರೆ ಅರೆ ಅರೆ, ಹಾಡಲ್ಲೂ
ಅರೆ ಅರೆ ಅರೆ ಅರೆ, ನೀನೇನೇ
ಮಳೆಯಲ್ಲಿ ನವಿಲೊಂದು ಬೀಗುತ್ತಿತ್ತು
ಆ ನವಿಲು ನಿನ್ನ ಕಂಡು ಮಂಕಾಯಿತು
ಮಾತು ಅಂದು, ಮೌನ ಇಂದು, ಮತ್ತೆ ಮಾತು ಎಂದಿಗೋ
ಹಣ್ಣಿನ ಸಿಹಿ ನೀನೇ
ನನ್ನ ಪ್ರೀತಿಯ ಸಹಿ ನೀನೇ
ಅರೆ ಅರೆ ಅರೆ ಅರೆ, ಪದದಲ್ಲೂ
ಅರೆ ಅರೆ ಅರೆ ಅರೆ, ನೀನೇನೇ
ನೆನಪಂತು ನಿನದೇನೆ ಪ್ರತಿಕ್ಷಣದಲೂ
ನೆಪವಂತು ಬೇಕಿಲ್ಲ ನಿನ್ನ ನೆನೆಯಲು
ಕಣ್ಣ ಸದ್ದು, ಹೃದಯ ಗೆದ್ದು, ಎಲ್ಲೋ ಹೇಗೋ ಸೋತೆನಾ
ಬರಗಾಲದ ಮಳೆ ನೀನೇ
ನನ್ನ ಪ್ರೀತಿಯ ಹೊಳೆ ನೀನೇ
ಅರೆ ಅರೆ ಅರೆ ಅರೆ ನಾನೆಂದೂ
ಅರೆ ಅರೆ ಅರೆ ಅರೆ ನಿನ್ನವನೇ
ನೀನೇ
ನಾನೀನೆ
ನನಗೆಲ್ಲಾ ನೀನೇ
ಅಲ್ಲೂ ನೀನೇ
ಇಲ್ಲೂ ನೀನೇ
ಎಲ್ಲೆಲ್ಲೂ ನೀನೇ................
No comments:
Post a Comment