Thursday, November 4, 2010

ಕನ್ನಡ-ಕನ್ನಡಿಗ-ಕರ್ನಾಟಕದ ಬೆಳವಣಿಗೆಯಲ್ಲಿ ನಮ್ಮ ಪಾತ್ರ ಮತ್ತು ಕರ್ತವ್ಯ

ಭವ್ಯ ಭಾರತದ ವಿಶಾಲ ನಕ್ಷೆಯಲಿ ದಕ್ಷಿಣ ಪ್ರಾಂತ್ಯದ ಮದ್ಯದಲ್ಲಿ ಬರುವ ಪ್ರದೇಶವೇ ನಮ್ಮ ಕರುನಾಡು. ಹಸಿರು ವನಗಳ, ಮನಸೆಳೆಯುವ ಬೆಟ್ಟ ಗುಡ್ಡಗಳ, ಶಾಂತಿಯಿಂದ ಹರಿಯುವ ಸುಂದರ ನದಿಗಳ, ಪ್ರಸಿದ್ದ ಐತಿಹಾಸಿಕ ದೇವಾಲಯಗಳ, ಮನಮೊಹಕ ಸಮುದ್ರಗಳ ಸುಂದರ ನಾಡು. ಅವಕಾಶಗಳು ಕೈಬೀಸಿ ಕರೆಯುವ ಸಿರಿಗಂಧದ ಬೀಡು. ಸುಂದರ ವಾತಾವರಣ, ಎಲ್ಲರನು ಆಹ್ವಾನಿಸಿ, ಅವರಿಗನುಗುಣವಾಗಿ ಜೀವನ ಸಾಗಿಸುವ ಹೃದಯವಂತ ಜೀವಿಗಳು. ಸಾಹಿತ್ಯದಲ್ಲಿ ಅತೀ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆ ನಮ್ಮ ನಾಡಿಗೆ ಸೆರಿದ್ದಾಗಿದೆ. ಕಾವೆರಿಯಿಂದಿಡಿದು ಗೋದಾವರಿಯವರೆಗು ಹಬ್ಬಿರುವ ಪ್ರಾಂತ್ಯ ನಮ್ಮದು. ಇಂತಹ ಸುಂದರ ನಾಡಿನಲ್ಲಿ ಹುಟ್ಟಿರುವ ನಾವೆಲ್ಲಾ ಒಂದು ರೀತಿಯಲ್ಲಿ ಧನ್ಯರೇ ಸರಿ. ಕರುನಾಡಿನಲ್ಲಿ ಹುಟ್ಟಿ, ಶಾಸ್ತ್ರೀಯ ಭಾಷೆಯಾದ ಕನ್ನಡವನು ತಮ್ಮ ಮಾತೃಭಾಷೆಯನ್ನಾಗಿಸಿಕೊಂಡಿರುವವರೆಲ್ಲ ಕನ್ನಡಿಗರು. ಭಾಷೆಯು ಸದಾ ಒಂದು ನಾಡಿನ ಸಂಸ್ಕೃತಿಯ ಪ್ರತೀಕ. ಆದರೆ ಕನ್ನಡಿಗರ ಅತೀ ಹೃದಯ ವಿಶಾಲತೆಯಿಂದ ಕನ್ನಡ ನಾಡಿನಲ್ಲಿ ಕನ್ನಡವೇ ನಶೀಸಿಹೊಗಬಹುದಾದಂತಹ ಕಾಲ ಬಂದಿದೆ. ಇದಕ್ಕೆ ಕಾರಣ ಪರಭಾಷೆಯ ಮೇಲಿರುವ ವ್ಯಾಮೋಹವೋ ಅಥವಾ ಕನ್ನಡ ಬಗ್ಗೆ ಇರುವ ಅಸಡ್ಡೆಯೋ ಆ ದೇವರೇ ಬಲ್ಲ. ಇದನೆನೆಯುತ್ತಿದ್ದರೆ ಒಂದು ಸಣ್ಣ ಕಥೆಯ ನೆನಪಾಗುತ್ತದೆ.

ಅಂದೊಂದು ದಿನ ನನ್ನ ಸ್ನೇಹಿತನ ಮನೆಯಲ್ಲಿ ಸತ್ಯನಾರಾಯಣ ಪೂಜೆ. ಅವರ ಮನೆಯವರೆಲ್ಲ ಭಕ್ತಿಭಾವಗಳಿಂದ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದರು. ವ್ರುದ್ದರೆಲ್ಲರು ಹೆಳೆಯ ನೆನಪುಗಳನ್ನು ಉತ್ಸಾಹ, ಹರುಷದಿಂದ ಹಂಚಿಕೊಳ್ಳುತ್ತಿದ್ದರು. ಎಲ್ಲಿ ನೋಡಿದರೂ ಪುಟಾಣಿ ಮಕ್ಕಳ ಮುಗ್ಧ ನಗೆಯ ಸದ್ದು, ಅವರ ವಿಚಿತ್ರ ನಮಗರಿಯದ ಕಾಲ್ಪನಿಕ ಆಟಗಳು. ಒಟ್ಟಿನಲ್ಲಿ ಅಲ್ಲಿ ಸೃಷ್ಟಿಯಾಗಿದ್ದ ವಾತಾವರಣವೇ ವಿಶೇಷವಾಗಿತ್ತು. ಇವೆಲ್ಲದರ ನಡುವೆ ಯಾವುದೋ ಮೂಲೆಯಿಂದ ಮಗುವೊಂದು ಅಳುವ ಶಬ್ಧ ಕೇಳಿಬಂತು. ನಾನು ನನ್ನ ಸ್ನೇಹಿತರು ಅಲ್ಲಿಗೆ ಹೊಗಿ ನೋಡಿದಾಗ ತಾಯಿಯೊಬ್ಬಳು ತನ್ನ ಮಗನಿಗೆ ಥಳಿಸುತ್ತಿದ್ದ ದೃಶ್ಯವನ್ನು ಕಂಡೆವು. ಸ್ನೇಹಿತೆಯೊಬ್ಬಳು ತಾಯಿಯ ಬಳಿಹೋಗಿ " ಅಮ್ಮ ನೀವೇಕೆ ಪುಟ್ಟು ಕಂದನನ್ನು ಹೀಗೆ ಥಳಿಸುತ್ತಿರುವಿರಿ?" ಎಂದು ಕೇಳಿದಾಗ ಆ ತಾಯಿ ಉತ್ತರಿಸಿದ್ದು ಹೀಗೆ " Who the hell are you? Please mind your own buisiness". ಅದನು ಕೇಳಿ ನಮಗೆಲ್ಲ ಒಂದು ರೀತಿ ಗರಬಡಿದಂತೆ ಆಯಿತು. ಒಬ್ಬರೊಬ್ಬರ ಮೊಗವನು ಒಬ್ಬರು ನೋಡುತ್ತ ನಿಶಬ್ಧವಾಗಿ ಎಲ್ಲರೂ ನಿಂತುಬಿಟ್ಟೆವು. ಹರುಷದಿಂದ ಭೀಗುತ್ತಿದ್ದ ಎಲ್ಲರ ಮೊಗವೂ ಕಳಹೀನವಾಯಿತು. ಅದೇ ಸಮಯದಲ್ಲಿ ಆ ಮಗುವಿನ ತಂದೆ ಅಲ್ಲಿಗೆ ಬಂದು ಅವರ ಶ್ರೀಮತಿಯ ಬಳಿ ಹೋಗಿ "ಏನ್ ಆಯಿತು?" ಎಂದು ಕೇಳಿದರು. ಆಕೆ ನೀಡಿದ ಉತ್ತರ ಕೇಳಿ ನಮಗೆಲ್ಲ ಒಂದು ನಿಮಿಷ ಯಾವ ಮಾತೂ ಹೊರಡಲಿಲ್ಲ. ಆಕೆಯ ಉತ್ತರ " I asked him to talk in English with his friends. But this idiot is talking in kannada with all of them. What should i do??" ಈ ರೀತಿಯ ಮಾತನು ಮೊದಲ ಬಾರಿ ಕೇಳಿದ ನನ್ನ ಮನದಲ್ಲಿ ಹುಟ್ಟಿದ ಆಕೆಯ ಮಾತಿಗೆ ವಿರುದ್ದದ ಮಾತುಗಳು ನೂರಾರು ಆದರೆ ಅದ್ಯಾಕೋ ಕಾಣೆ ತುಟಿಯಿಂದ ಒಂದು ಮಾತು ಹೊರಡಲಿಲ್ಲ. ಧೈರ್ಯ ಕಮ್ಮಿಯಾಗಿತ್ತೊ ಅಥವಾ ಆಕೆಯ ಹುಚ್ಚುತನಕ್ಕೆ ಉತ್ತರ ನೀಡಲು ಇಷ್ಟವಾಗಲಿಲ್ಲವೋ, ಅಲ್ಲಿಂದ ಹೊರಟೇಬಿಟ್ಟೆ.

ಮನೆಗೆ ಹಿಂದಿರುಗಿದ ಮೇಲೆ ಬರೀ ಆ ಪುಟ್ಟ ಕಂದನ ಅಳುವಿನ ಸದ್ದೇ ಮನದಲ್ಲಿ ಗುಣುಗುತ್ತಿತ್ತು. ಅವನು ಇನ್ನು ಪುಟ್ಟ ಹುಡುಗ, ಅಲ್ಲದೆ ಅವನ ಸ್ನೇಹಿತರೊಡನೆ ಅದೂ ಕರ್ನಾಟಕದಲ್ಲಿ ಕನ್ನಡ ಮಾತನಾಡಿದರೆ ತಪ್ಪೇನು? ಆ ತಾಯಿಗೆ ಕನ್ನಡದ ಬಗ್ಗೆ ಅಷ್ಟೆಕೆ ಅಸಡ್ಡೆ? ಹಾಗಾದಾಗ ನನ್ನನೂ ಸೇರಿ ಎಲ್ಲರು ಮೌನ ತಾಳಿದ್ದೆಕೆ? ಬರೀ ಈ ರೀತಿಯ ಪ್ರಶ್ನೆಗಳೇ. ಈ ರೀತಿಯ ಆಂಗ್ಲ ವ್ಯಾಮೊಹ ನಮಗೆ ಬೇಕಾ? ಕನ್ನಡದಲ್ಲಿರದ, ಆಂಗ್ಲದಲ್ಲಿರುವ ಆ ಅಂಶವೇನು? ಬಸ್ಸಿನಲ್ಲಿ ಹೋಗುವಾಗ ಬಾಲಕರು ಮಾತನಾಡುವ ಭಾಷೆ ಆಂಗ್ಲ. ತಾಯಿ ತನ್ನ ಮಕ್ಕಳೊಡನೆ ಸಂಭಾಷಿಸುವ ಭಾಷೆ ಆಂಗ್ಲ. ಆಂಗ್ಲ ಬೇರೆ ನಾಡು ಅಥವ ಬೇರೆ ರಾಷ್ಟ್ರದವರೊಡನೆ ಮಾತನಾಡಲು ಬೇಕೇ ಬೇಕಾದ ಭಾಷೆ, ಇದನು ನಾನು ಒಪ್ಪುವೆ. ಆದರೆ ಆ ಪುಟ್ಟ ಕಂದನೇಕೆ ಸ್ನೇಹಿತರೊಡನೆ ಆ ಸಣ್ಣ ವಯಸ್ಸಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡಬೇಕು? ಸಮಯ ಹೋದಂತೆ ಅದು ಹಾಗೆ ಬರುವುದಿಲ್ಲವೆ? ಹೀಗೆ ಯೋಚಿಸುತ ಇಡೀ ರಾತ್ರಿ ಕಳೆದು ಹೋಯಿತು. ಆದರೆ ಉಧ್ಭವಿಸಿದ ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರಕಲಿಲ್ಲ.

ಹೊಯ್ಸಳರು, ಕದಂಬರು, ಶಾತವಾಹನರು ಆಳ್ವಿಕೆ ನಡೆಸಿದ ನಾಡು ನಮ್ಮದು. ಕನ್ನಡ ಭಾಷೆಯ, ಕನ್ನಡ ನಾಡಿನ ಉಳಿವಿಕೆ, ಬೆಳವಣಿಗೆಗಾಗಿ ಹಲವಾರು ಸಂಸ್ಥೆಗಳು, ಪ್ರಾಧಿಕಾರಗಳು ಹಗಲೂ ರಾತ್ರಿ ಶ್ರಮಪಡುತ್ತಿವೆ. ಹಲವಾರು ಗಣ್ಯರು ತಮ್ಮ ಜೀವನವನ್ನೆ ಕನ್ನಡ ನಾಡಿಗಾಗಿ ಮುಡಿಪಾಗಿಟ್ಟಿದ್ದಾರೆ. ನಮ್ಮ ಭಾಷೆಗೆ ನೀಡುವ ಗೌರವವೇ ನಾವವರಿಗೆ ಮಡಬಹುದಾದ ಸಹಾಯ. ಬಹುಶಃ ನಾಡ ಭಾಷೆಗಾಗಿ ಇಷ್ಟೊಂದು ಚಳುವಳಿಗಳು ಬೆರೆ ಯಾವ ನಾಡಿನಲ್ಲು ನಡೆದಿಲ್ಲ. ಅವರವರ ಭಾಷೆಗೆ ಅಲ್ಲಿನ ಜನರೇ ಸಹಜವಾಗಿ ಗೌರವದಿಂದ , ಅಭಿಮಾನದಿಂದ ಸಲ್ಲಿಸಬೇಕಾದ ನ್ಯಾಯ ಸಲ್ಲಿಸುತ್ತಿದ್ದಾರೆ. ಪರಭಾಷೆಗಳನು ಗೌರವಿಸಿ, ಆದರೆ ನಮ್ಮ ಮಾತ್ರುಭಾಷೆಯನು ಮಾತ್ರ ಎಂದೂ ನಿಂದಿಸ ಬೇಡಿ. ಪರಭಾಷ ಚಿತ್ರಗಳನು ನೋಡಿ, ಆದರೆ ಕನ್ನಡ ಚಿತ್ರಗಳನು ವೀಕ್ಷಿಸದೆ, ತ್ಯಗಳುತ್ತಿರಬೇಡಿ. ಕನ್ನಡ ನಾಡಿನಲ್ಲಿ ಕನ್ನಡ ಮಾತನಡಲು ಹಿಂಜರಿಯಬೇಡಿ. ಕನ್ನಡ ಭಾಷೆಯ ಬಗ್ಗೆ ನಿರಭಿಮಾನ ತೋರಿಸಬೇಡಿ. ಕನ್ನಡ ತಿಳಿಯದವರಿಗೆ ಕನ್ನಡ ಕಲಿಯಲು ಸಹಕರಿಸಿ, ಪ್ರೋತ್ಸಾಹಿಸಿ. ನಿಮ್ಮ ಕೈಲಾದರೆ ಅವರಿಗೆ ಮಾತನಾಡಲು ಕಲಿಸಿ. ಕಲಿತವರು ಕನ್ನಡ ಮಾತನಾಡುವುದನ್ನು ಕಂಡು ಆನಂದಿಸಿ. ಕನ್ನಡ ನಾಡು ನುಡಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ನೀವೂ ಅರಿತು, ಗೌರವಿಸುತ ಅವರಿಗೂ ತಿಳಿಸಿ. ನಮ್ಮ ಕರುನಾಡಿನಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತೆ ಮಾಡಲು ಪಣವನ್ನು ತೊಡೊಣ. ಸಂಘಟಿತ ಸಂಚಲನದಿಂದ ಏನನ್ನಾದರೂ ಸಾಧಿಸಬಹುದೆಂದು ಸಾಭೀತುಪಡಿಸೊಣ. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ. ಕನ್ನಡ ನಾಡಿನ ಬೆಳವಣಿಗೆಯಲ್ಲೇ ನಮ್ಮೆಲ್ಲಾ ಕನ್ನಡಿಗರ ಏಳಿಗೆ. ಕನ್ನಡ ನಾಡಿನ ಅಭಿವೃದ್ದಿ ನಮ್ಮೆಲ್ಲರ ಹೊಣೆ. ಹುಡುಕಲು ಪ್ರಯತ್ನಿಸೋಣ ಕನ್ನಡ ಭಾಷೆಯನು ಪೋಷಿಸುವ ಹೊಸ ಬಗೆ. ಉರಿಯಲಿ ಪ್ರತೀಯೊಬ್ಬ ಕನ್ನಡಿಗನ ಎದೆಯಲ್ಲಿ ಕನ್ನಡತನವನು ಸಾರುವ ದಗೆ. ಇದನು ಸಾಧಿಸಿದರೆ ನಮ್ಮ ಕನ್ನಡ ಮಾತೆಗೆ ಮಾಡಿದಂತಾಗುವುದು ಒಂದು ಸಣ್ಣ ಸೇವೆ. ಮೂಡಿಸಬಹುದ ಆಕೆಯ ಸುಂದರ ಮೊಗದಲ್ಲೊಂದು ಮಂದಹಾಸದ ನಗೆ.

No comments:

Post a Comment